ಜೀವ ಭಾವ ಪದಗಳು
ಸಾಹಿತ್ಯ: ನಾಗತಿಹಳ್ಳಿ ರಮೇಶ್
ಸಂಗೀತ :ಮ್ಯಾಂಡೊಲಿನ್ ಪ್ರಸಾದ್
ವಾದ್ಯ ಸಂಯೋಜನೆ : ಕಿಶನ್ ಮೂರ್ತಿ
ಗಾಯನ: ಹೇಮಂತ್, ಎಂ.ಡಿ.ಪಲ್ಲವಿ
ಬಾಳ ದಾರಿಯಲಿ
ಜೀವ ಜೀವಗಳು
ಬೆಸೆಯುತ್ತವೆ
ನೋಯುತ್ತವೆ
ನರಳುತ್ತಿವೆ
ಬೇಯುತ್ತಿವೆ
ಪ್ರತಿ ಜಾಡಿನ ಅರಿವಿದ್ದರೂ….
ಈ ಬದುಕ ಬಲೆಯಲಿ
ಆ ಒಲವ ಹಂಬಲಿಸುವ
ಮುಖ ಮುಖಗಳನು ಕಾಣಲಾಗದೆ
ಕಲ್ಲುಗೂಟದಂತೆ ಇದ್ದೇ ಬಿಡುತ್ತವೆ.!?
ಮುಟ್ಟಿದರೆ ಕೊಸರುತ್ತಿವೆ
ಮಟ್ಟದಿರೆ ಕೊರಗುತ್ತಿವೆ
ನಡು ನಡುವೆ ಬಾಳು ಚಿಗುರುತ್ತವೆ.
ಚಲನೆ ಅಗಾಧ ಶಕ್ತಿ
ಹೊರಟಿದ್ದು ಇರುವೆ ಸಾಲಿನ ಹಾಗೆ
ನಮಗೆ
ಏಟು ಬಿಳುತ್ತಿರುವುದು
ಶತ್ರುಗಳಿಂದ ಮಾತ್ರವಲ್ಲ..
ಪ್ರಾಣ ಮಿತ್ರರಿಂದಲೂ ಕೂಡ
ಈ ಕವಿತೆಯನ್ನು ಹಾಡಾಗಿ ಕೇಳಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ
ಬತ್ತಿದಾ ಕೆರೆಗೂ ಬಲೆ ಹಾಸುವ ಚಿಂತೆ
ಹಗಲು
ಬಿಳಿ ಪಾರಿವಾಳಗಳಾ ಹಾರಿಸಿ
ರಾತ್ರಿ ಅವುಗಳತ್ತ
ಕವಣೆ ಕಲ್ಲ ಬೀಸುವರು
ಈಗೀಗ ..
ಹೂವುಗಳು ಬೇಗನೇ ಫಕಳೆ
ಕಳೆದು ಕೊಳುತ್ತಿವೆ
ಹಕ್ಕಿಗಳು
ಮೊಟ್ಟೆಯೊಡೆವ ಮೊದಲೇ
ಹಾರುವುದ ಕಲಿಯುತ್ತಿವೆ.
ನರನಾಡಿಗಳೊಳಗೆ ನೆರೆದ
ಮೌನ ಮಾತುಗಳ ಜಾತ್ರೆ
ಮನ ಖಾಲಿಯಾದಂತೆಲ್ಲಾ
ತಿಳಿ ತುಂಬುವುದು ಕಾಣಾ…
- ನಾಗತಿಹಳ್ಳಿ ರಮೇಶ