ನದಿಯು ಹರಿದಿದೆ
ಎದೆಯಿಂದ ಎದೆಗೆ
ತರುಲತೆ ಉಸಿರಿವೆ
ಎಲೆ ಬಿಚ್ಚಿ ನುಲಿದಿವೆ
ಹಗಲಿರುಳು ತಡಕಾಡಿವೆ
ನಲ್ಲೆಯ ಮುತ್ತಲಿ ಅಡಗಿದೆಯೊ ಮತ್ತು
ನೀರಿಂದಾಕಾಶಕೆ ಹಾರಿದೆ ಹಕ್ಕಿ
ರಕ್ಕೆಯ ಸದ್ದು ಗಾಳೀಲಿ ಲೀನ
ಮೀನಿನ ಒಡಲೊಳು ಹರಿದಿದೆ ನೀರು
ಕಾಯದ ಮಾಯೆಗೆ ತೆರೆದಿದೆ ಕಣ್ಣು
ಬಾಣವು ನಾಟಿ ಮಳೆಕಾವು ನನ್ನೊಳಗೆ
ಹನಿಗೊಂಡಿವೆ ಕಣ್ಣು ಹರುಷದಲಿ
ವರ್ಷದಾರೆ ಎದೆಅಂಗಳದಲಿ
ಬಿಂದುಬಿಂದುವಲೂ ಸೂರ್ಯನ ಹೊಂಬೆಳಕು
ಬಣ್ಣದ ತೇರು ಹೊರಟಿದೆ ಮುಗಿಲಿಗೆ
ಕಾಮನ ಬಿಲ್ಲಾ ತೊಟ್ಟಿದೆ ಕೊರಳು
ಮೈಮನವ ತಬ್ಬಿದೆ ಒಲವಿನ ನೆರಳು
-ನಾಗತಿಹಳ್ಳಿರಮೇಶ