ನಾಗತಿಹಳ್ಳಿ ರಮೇಶ್ ಅವರು 2014ರ ಜನವರಿ 25ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಆಹೋರಾತ್ರಿ ಆಯೋಜಿಸಿದ್ದ ʻಮನದ ಮಿಂಚು ಪಿ. ಲಂಕೇಶ್ʼ ಕಾರ್ಯಕ್ರಮದ ಆಹ್ವಾನ ಪತ್ರಿಕೆ ಇಲ್ಲಿದೆ.
ಇದರಲ್ಲಿ ಮಂಟೇಸ್ವಾಮಿ ಕಾವ್ಯವನ್ನು ನೀಲಗಾರರು ಹಾಡಿದರೆ, ವಿವಿಧ ಕವಿಗಳು ತಮ್ಮ ಕವಿತೆಗಳನ್ನು ವಾಚಿಸಿದರು. ಅನೇಕ ಸಾಧಕರಿಗೆ ನೆಲದ ನಕ್ಷತ್ರ ಎಂಬ ಪುರಸ್ಕಾರ ನೀಡಿ ಗೌರವಿಸಲಾಯಿತು. ಆ ನಂತರ ಮಾತುಕತೆ, ಜನಪದ ಹಾಗೂ ರಂಗಗೀತೆಗಳ ಗಾಯನ, ಚಲನಚಿತ್ರಗಳ ಪ್ರದರ್ಶನವೂ ಇತ್ತು. ಇದೊಂದು ಹೊಸಬಗೆಯ ಕಾರ್ಯಕ್ರಮವೆಂದು ಸಾಹಿತಿ, ಚಿಂತಕರು ಮತ್ತು ವಿಮರ್ಶಕರಿಂದ ಬಣ್ಣಿಸಲ್ಪಟ್ಟಿತ್ತು. ಆಂಧ್ರದ ಪ್ರಖ್ಯಾತ ಕವಿ, ಹಾಡುಗಾರ ಶ್ರೀ ಗೋರಟಿ ವೆಂಕನ್ನಯ್ಯ ಪ್ರಮುಖ ಆಕರ್ಷಣೆಯ ಕೇಂದ್ರಬಿಂದುವಾಗಿದ್ದರು. ಮುಖ್ಯವಾಗಿ ಈ ಕಾರ್ಯಕ್ರಮವನ್ನು ಪೌರಕಾರ್ಮಿಕರು ಉದ್ಘಾಟಿಸಿದ್ದರು.



