ಸುಡುವ ಭೂಮಿಯ ಮೇಲೆ
ಮೋಡ ಕಣ್ಣ ಹಾಯಿಸಿ
ಹೊಲಗದ್ದೆ ಬಯಲಲಿ
ಜೀವ ಜೀವದ ಹಾಡು
ಅರೆ ಹೊಟ್ಟೆ ಬರಿ ಮೈಯ
ಕಾದ ಕಣ್ಣುಗಳಲ್ಲಿ
ಬೆಂದಿರುವ ಕನಸಿಗೆ
ಜೀವ ಜೀವದ ಹಾಡು
ಮನುಜ ಮನುಜರ ನಡುವೆ
ಕೊಳೆತಿರುವ ಪ್ರೀತಿ
ಬೇರೂರಿ ಚಿಗುರೊಡೆದು
ಜೀವ ಜೀವದ ಹಾಡು
ಬೀಜದಿಂದ ಮರ ಹುಟ್ಟಿ ಮರಮರಕೂ ಬಳ್ಳಿ ಹಬ್ಬಿ
ಹೂ ಬಿಟ್ಟುಕಾಡೇ ಅಲೆವ
ಜೀವ ಜೀವದ ಹಾಡು
-ನಾಗತಿಹಳ್ಳಿರಮೇಶ